logo
Search...

Kannada Koota

Karnataka Culture Language Technical
  Founded: September 19, 2022

About this Club

ನಮ್ಮ ಯುವ ಪೀಳಿಗೆಯ ಮನಸ್ಸಿನಲ್ಲಿ ಕನ್ನಡ ಅಭಿಮಾನ ಹಾಗೂ ಕರ್ನಾಟಕದ ಸಂಸ್ಕೃತಿ,ಇತಿಹಾಸ,ಪರಂಪರೆಯ ಬಗ್ಗೆ ಅರಿವು ಮೂಡಿಸುವ ಮತ್ತು ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಜವಬ್ದಾರಿಯನ್ನು ಮನಸ್ಸಲ್ಲಿಟ್ಟುಕೊಂಡು ನಮ್ಮ ಪಿ.ಇ.ಎಸ್ ವಿಶ್ವವಿದ್ಯಾನಿಲಯದಲ್ಲಿ ೧೯-೦೯-೨೦೨೨ ರಲ್ಲಿ ಕಾಯ-ವಾಚ-ಮನಸ್ಸಿನಿಂದ ಕನ್ನಡ ಕೂಟವನ್ನು ಸ್ಥಾಪಿಸಲಾಯಿತು. ಈ ಕೂಟವು ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿಗಳ ಸಹಕಾರದೊಂದಿಗೆ, ಪ್ರತಿ ವರ್ಷವೂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಹಾಗೂ ಕನ್ನಡ ನಾಡಿನ ಭಾಷೆ,ಸಾಹಿತ್ಯ,ಸಂಸ್ಕ್ರತಿ,ಕಲೆಯನ್ನು ಬೆಳೆಸುವ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮ,ರಸಪ್ರಶ್ನೆ ಕಾರ್ಯಕ್ರಮ,ಹ್ಯಾಕಥಾನ್ಂತಹ ತಾಂತ್ರಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಲಾಗುತ್ತದೆ. ಇದಲ್ಲದೆ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡ ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು,ಇದರಿಂದ ವಿದ್ಯಾರ್ಥಿಗಳಲ್ಲಿ ಕನ್ನಡದ ಮೇಲೆ ಸ್ವಾಭಿಮಾನ ಹೆಚ್ಚಾಗಿ ಬೆಳೆಯಲು ಸಹಾಯವಾಗವುದು.ಈ ಕೂಟವು ಕನ್ನಡ ನಾಡು ನುಡಿಯ ಬಗ್ಗೆ ವಿಷಯವನ್ನು ಪಸರಿಸುವ ನಿಷ್ಟಾವಂತ ಹಾಗೂ ಉತ್ಸಾಹಭರಿತ ಸದಸ್ಯರನ್ನು ಹೊಂದಿದೆ ಹಾಗೂ ಕಾರ್ಯಕ್ಷಮತೆಯುಳ್ಳ ಹೊಸ ಮುಖಗಳನ್ನು ಸಹ ಪ್ರತಿವರ್ಷವು ಸೇರಿಸಿಕೊಳ್ಳಲಾಗುವುದು.
  • #Cultural
  • September 19, 2022
  • Viewed - 4795
  • Liked - 1417